ಅಳೆದು ತೂಗುವ ಬಾಳು ಎಲ್ಲಿ ನಿಲ್ಲುವುದಯ್ಯ
ನಂಬಿ ಕೆಟ್ಟವರಿಲ್ಲ ನಂಬಿಕೆಯಲಿ ಹುಸಿಯಿಲ್ಲ
ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ
ಹೊಸವರುಷ ಹೊಸದಿವಸ ಹೊಸ ಚೈತ್ರ ಮಾಸ
ಅಲೆಮಾರಿ ಬಾಳು ಬಲುಗೋಳು
ಅಲೆದಲೆದು ದಣಿವಾಯ್ತು ಬೆವರು ಹರಿದೋಯ್ತು
ವಾಸಕೊಂದ್ಯೋಗ್ಯದ ಮನೆಯೂ ಇಲವಾಯ್ತು
ನಂಬಿ ಕೆಟ್ಟವರಿಲ್ಲ ನಂಬಿಕೆಯಲಿ ಹುಸಿಯಿಲ್ಲ
ಹಸನಾದ ಬಾಳು ಸಿಗಲೇ ಇಲ್ಲ
ಹಸಿದಾ ಬಸಿರಿಗೆ ಯಾರೂ ಉಣಬಡಿಸಲು ಬರಲಿಲ್ಲ
ದುರ್ದೈವಿ ಬಾಳು ಬೇಕಿಲ್ಲ
ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ
ಬಂಧು-ಬಳಗದ ಜಗಳ ಉಂಡಾಮನೆಯೋಡೆಯೋ ತನಕ
ಇರುವ ಕೆಲ ದಿನಗಳಲಿ ಬರುವ ಸುಖಮಯ ಗಳಿಗೆ
ವ್ಯರ್ಥವಾಗದ ಹಾಗೆ ಬದುಕಿ ಬಾಳಿರಿ ನೀವು
ಹೊಸವರುಷ ಹೊಸದಿವಸ ಹೊಸ ಚೈತ್ರ ಮಾಸ
ಹೊಸ ಹುರುಪು ಹೊಸ ತನವ ಹೋತ್ತು ತರಲಿ
ನವ ಚೈತನ್ಯದ ಚಿಲುಮೆ ಗರಿಗೆದರಲಿ
ನವಯುಗದ ನವಜೀವ ಉಲ್ಲಾಸ ತರಲಿ
ಯಲ್ಲರಿಗೂ ಶುಭವಾಗಲಿ...
ನವಯುಗದ ನವಜೀವ ಉಲ್ಲಾಸ ತರಲಿ
ಯಲ್ಲರಿಗೂ ಶುಭವಾಗಲಿ...