ಕನಸೇ ಕಾಡದಿರು ನನ್ನ ಮನವ ಕಲಕದಿರು
ಚಿಗುರಿದ ಆಸೆಯ ಮೊಟಕು ಗೊಳಿಸುತ
ನೋವಾ ಉಣಿಸದಿರು ನನ್ನ ಮನವ ಕದಡದಿರು
ಕನಸೇ ಕಾಡದಿರು ನನ್ನ ಮನವ ಕಲಕದಿರು
ಎತ್ತ ಎತ್ತಾಲೋ ಚಲಿಸುವ ಮನವನು
ಹಿಡಿದು ಕಾಡದಿರು ನನ್ನ ಜೀವಾ ಹಿಂಡದಿರು
ಬಳಲಿದ ಜೀವವು ಬೆಂಡಾಗಿಹುದು
ಕನಸೇ ಕಾಡದಿರು ನನ್ನ ಮನವ ಕಲಕದಿರು
ಉರಿಯುವ ಬೆಂಕಿಗೆ ತುಪ್ಪವ ಸುರಿಯುವ
ಉಂಡಮನೆಗೆ ಎರಡೂ ಬಗೆಯುವ
ಸುಖ ಸಂಸಾರದಿ ಹುಳಿಯನು ಹಿಂಡುವ
ಕನಸೇ ಕಾಡದಿರು ನನ್ನ ಮನವ ಕಲಕದಿರು
ತಣ್ಣನೆ ಗಾಳಿಯ ಚುಮುಚುಮು ಚಳಿಯಲಿ
ತುಂತುರು ಹನಿಯ ಸ್ವಾತಿಯ ಮುತ್ತೊಂದು
ಧರೆಗೆ ಬಾರದಿಹ ಕನಸಾ ಕಾಡದಿರು
ಕನಸೇ ಕಾಡದಿರು ನನ್ನ ಮನವ ಕಲಕದಿರು