ಸಾಗುತಿಹುದು ಬದುಕಿನಾ ಬಂಡಿ
ಅದ ಸೇರ ಹೊರಟಿಹುದು ಸುಜ್ಞಾನದಾ ತುದೀ...
ಸ್ನೇಹದಾ ಕಡಲಿನಲಿ ಪ್ರೀತಿಯ ಅಲೆಗಳವು
ಬದುಕ ಭವಣೆಯ ಮೆಟ್ಟಿ ದಾಪುಗಾಲಿಡುತಿಹವು
ಏಳುಬೀಳುಗಳ ನಡುವೆ ಸಹಸ್ರ ಮೈಲಿಗಳ ಕ್ರಮಿಸಿ
ತಲುಪ ಹೊರಟಿಹವು ಉತ್ತುಂಗದೆಡೆಗೆ...
ಹುಟ್ಟಿದಾರಾಭ್ಯದಿ ಮರಣ ಕಾಲದವರೆಗೆ
ಬದುಕು ಕಲಿಸುವುದು ಬಗೆಬಗೆಯ ಪಾಠವನು
ನಮ್ಮವರಲ್ಲದ ನಮ್ಮವರೇ ಆದ ಮನುಕುಲದ ನಡುವೆ
ತಲುಪ ಹೊರಟಿಹೆವು ಮೊಕ್ಷದೆಡೆಗೆ...
ಬದುಕ ಭವಣೆಯ ನಡುವೆ
ಬದುಕಿ ಬಾಳಲೆ ಬೇಕು
ಬದುಕಿ ತೀರೇಲೆಂದು ಹೊರಟವಗೆ
ಬದುಕು ಸ್ವರ್ಗದಾ ಬೀಡು ಬದುಕು ಸ್ವರ್ಗದಾ ಬೀಡು....!!!
ರಚನೆ:- ವಿಘ್ನೇಶ ಭಟ್