Monday, 18 July 2016

"ಕಂಬನಿ ಮಿಡಿತ"


          ನಿನ್ನ ಕಂದನ ನೆನೆದು ಕಂಬನಿಯ ಮಿಡಿವ್ಯಾಕೆ 
          ನಿನ್ನ ಕಂದ ಬೆಳೆದಿಹನು ನನ್ನ ಮನೆಯಲಿ 
          ಅಂಗಳದಿ ನಲಿಯುತ ಹೆಂಗಳೆಯರ ಸೆಳೆಯುತ 
          ನಗುಮೊಗದಿ ನಲಿದಿಹನು ನನ್ನ ಮನೆಯಲಿ 

               ಮುದ್ದು ಮುಖದ ಮುರುಳಿ ಲೋಲ 
               ಲಲನೆಯರ ಗೋಪಾಲ 
               ಮುರುಳಿ ಮೋಹನ ಮುದ್ದು ಬಾಲ 
               ಆಡಿ ಬೆಳೆದಿಹನು ನನ್ನ ಮನೆಯಲಿ 

              ದೊಡ್ಡವನಾಗಿ ಬೆಳೆಯುತಿಹನು 
              ಊರಮಂದಿಯ ನಲ್ಮೆಯ ಕುವರನು 
               ಉತ್ತಮ ದರ್ಜೆಯ ಕಲಾರತುನ 
               ಬೆಳೆಯುತಿಹನು ನನ್ನ ಮನೆಯಲಿ 

        ನಿನ್ನ ಕಂದನ ನೆನೆದು ಕಂಬನಿಯ ಮಿಡಿವ್ಯಾಕೆ  
        ಬೆಳೆದು ನಿಂತಿಹನು ನಿನ್ನ ಮಗನು 
        ಹೆತ್ತ ತಾಯಿಯ ಸೇವೆಗೆಂದು ಹೊತ್ತುಮುಗಿಯುವ ವೇಳೆಗಿಂದು 
        ಬಂದು ಸೇರುವ ನಿನ್ನ ಮನೆಗೆ ಬಂದು ಸೇರುವ ನಿನ್ನ ಮನಕೆ. 

                       ರಚನೆ :- ವಿಘ್ನೇಶ ಭಟ್