ಮನದ ಮಿಡಿತದ ಭಾವ ಮನದಲಿ
ತೆರೆದು ತೋರದ ತುಡಿತ ಎದೆಯಲಿ
ಹುದುಗಿ ಹೋಯಿತೆ ಸತ್ಯ ವಿಷಯವು
ಮೌನ ದೇವಿಯ ಮಡಿಲಲಿ
ರೋಷ ಹುಟ್ಟಿತು ಮನದ ನಡುವಲಿ
ಅವಿತು ಕೊಂಡಿತು ನಡುಕ ಮನದಲಿ
ಮೌನ ದೇವಿಯ ಮಡಿಲಲಿ
ಹೇಳೇ ಬಿಟ್ಟೆನು ನಿಗೂಢ ಸತ್ಯವ
ಬಿಗಿದ ಮನಸಿನ ನಿಕಟ ಸತ್ಯವ
ಬಿಗಿದ ಮನಸಿನ ನಿಕಟ ಸತ್ಯವ
ಹಗುರ ವಾಯಿತು ನನ್ನೀ ಮನವು
ಮೌನ ದೇವಿಯ ಮಡಿಲಲ್ಲಿ
ಮೌನ ದೇವಿಯ ಮಡಿಲಲ್ಲಿ
ರಚನೆ :- ವಿಘ್ನೇಶ ಭಟ್
No comments:
Post a Comment