Saturday, 1 October 2016
Monday, 18 July 2016
"ಕಂಬನಿ ಮಿಡಿತ"
ನಿನ್ನ ಕಂದನ ನೆನೆದು ಕಂಬನಿಯ ಮಿಡಿವ್ಯಾಕೆ
ನಿನ್ನ ಕಂದ ಬೆಳೆದಿಹನು ನನ್ನ ಮನೆಯಲಿ
ಅಂಗಳದಿ ನಲಿಯುತ ಹೆಂಗಳೆಯರ ಸೆಳೆಯುತ
ನಗುಮೊಗದಿ ನಲಿದಿಹನು ನನ್ನ ಮನೆಯಲಿ
ಮುದ್ದು ಮುಖದ ಮುರುಳಿ ಲೋಲ
ಲಲನೆಯರ ಗೋಪಾಲ
ಮುರುಳಿ ಮೋಹನ ಮುದ್ದು ಬಾಲ
ಆಡಿ ಬೆಳೆದಿಹನು ನನ್ನ ಮನೆಯಲಿ
ದೊಡ್ಡವನಾಗಿ ಬೆಳೆಯುತಿಹನು
ಊರಮಂದಿಯ ನಲ್ಮೆಯ ಕುವರನು
ಉತ್ತಮ ದರ್ಜೆಯ ಕಲಾರತುನ
ಬೆಳೆಯುತಿಹನು ನನ್ನ ಮನೆಯಲಿ
ನಿನ್ನ ಕಂದನ ನೆನೆದು ಕಂಬನಿಯ ಮಿಡಿವ್ಯಾಕೆ
ಬೆಳೆದು ನಿಂತಿಹನು ನಿನ್ನ ಮಗನು
ಹೆತ್ತ ತಾಯಿಯ ಸೇವೆಗೆಂದು ಹೊತ್ತುಮುಗಿಯುವ ವೇಳೆಗಿಂದು
ಬಂದು ಸೇರುವ ನಿನ್ನ ಮನೆಗೆ ಬಂದು ಸೇರುವ ನಿನ್ನ ಮನಕೆ.
ರಚನೆ :- ವಿಘ್ನೇಶ ಭಟ್
Saturday, 25 June 2016
ನನ್ನ ಹೃದಯ..!!!
ಪ್ರೇಯಸಿ ಕೊಡುವೆಯ ನನ್ನ ಹೃದಯ
ಕಳೆದುಕೊಂಡಿಹೆ ನಿನ್ನ ನೋಡಿದಾ ಮಧುರ ಕ್ಷಣ
ತಾಳಲಾರದು ವಿರಹವೇದನೆಯ
ಕಾಯಿಸದಿರು ಈ ನಿನ್ನ ಇನಿಯನ....!!!
ಬದುಕು ಬೇಸತ್ತ ಸಮಯದಿ
ಮಿಂಚಂತೆ ಬಂದೆ ನನ್ನಬಾಳಲಿ
ಎಲೆಉದುರಿ ಚಿಗುರುವ ಈ ಸಮಯದಿ
ಇಂಪಾದ ತಂಪೆರೆದೆ ಈ ಬಾಳಲಿ...!!!
ಚೆಲುವೆ ನಿನ್ನ ಮರೆಯಲು ಏನೆಲ್ಲ ಮಾಡಿದೆ
ಆದರೆ ಎಲ್ಲಾ ಕಡೆ ನಿನ್ನ ನೆನಪೇ ಕಾಡಿದೆ.
ಮರೆಯ ಹೋದರೆ ಬರುವುದೀ ಆ ನಿನ್ನ ಚಹರೆ
ಮರೆಯಲಾಗದು ಆ ನಿನ್ನಸುಂದರ ಮೊಘವೇ...!!!
ಪ್ರೇಯಸಿ ಕೊಡುವೆಯ ನನ್ನ ಹೃದಯ
ಕಳೆದುಕೊಂಡಿಹೆ ನಿನ್ನ ನೋಡಿದಾ ಮಧುರ ಕ್ಷಣ...!!!
ರಚನೆ :- ವಿಘ್ನೇಶ ಭಟ್
Friday, 5 February 2016
ಬದುಕು ಸ್ವರ್ಗದಾ ಬೀಡು....!!!
ಸಾಗುತಿಹುದು ಬದುಕಿನಾ ಬಂಡಿ
ಅದ ಸೇರ ಹೊರಟಿಹುದು ಸುಜ್ಞಾನದಾ ತುದೀ...
ಸ್ನೇಹದಾ ಕಡಲಿನಲಿ ಪ್ರೀತಿಯ ಅಲೆಗಳವು
ಬದುಕ ಭವಣೆಯ ಮೆಟ್ಟಿ ದಾಪುಗಾಲಿಡುತಿಹವು
ಏಳುಬೀಳುಗಳ ನಡುವೆ ಸಹಸ್ರ ಮೈಲಿಗಳ ಕ್ರಮಿಸಿ
ತಲುಪ ಹೊರಟಿಹವು ಉತ್ತುಂಗದೆಡೆಗೆ...
ಹುಟ್ಟಿದಾರಾಭ್ಯದಿ ಮರಣ ಕಾಲದವರೆಗೆ
ಬದುಕು ಕಲಿಸುವುದು ಬಗೆಬಗೆಯ ಪಾಠವನು
ನಮ್ಮವರಲ್ಲದ ನಮ್ಮವರೇ ಆದ ಮನುಕುಲದ ನಡುವೆ
ತಲುಪ ಹೊರಟಿಹೆವು ಮೊಕ್ಷದೆಡೆಗೆ...
ಬದುಕ ಭವಣೆಯ ನಡುವೆ
ಬದುಕಿ ಬಾಳಲೆ ಬೇಕು
ಬದುಕಿ ತೀರೇಲೆಂದು ಹೊರಟವಗೆ
ಬದುಕು ಸ್ವರ್ಗದಾ ಬೀಡು ಬದುಕು ಸ್ವರ್ಗದಾ ಬೀಡು....!!!
ರಚನೆ:- ವಿಘ್ನೇಶ ಭಟ್
Subscribe to:
Posts (Atom)