ಮಂಜು ಸರಿಯಿತು ಹನಿಯು ಉದುರಿತು
ರವಿಯ ಕಿರಣವು ಮೂಡಿತು
ತಣ್ಣ ತಣ್ಣನೆ ಗಾಳಿ ಬೀಸಲು
ಹಕ್ಕಿ ಕಲರವ ಕೇಳಿತು
ಜಳಕವಾಯಿತು ತಿಂಡಿಮುಗಿಯಿತು
ಶಾಲೆ ಘಂಟೆಯು ಹೊಡೆಯಿತು
ಮಗುವು ಹೊರಟಿತು ನಗುವ ಮೊಗದಲಿ
ಶಾಲೆ ಸೇರುವ ತವಕದಿ....
ಮಧುರ ಪುಷ್ಪದ ಮಧುವ ಹೀರಲು
ದುಂಭಿ ನಲಿಯುತ ಹರುಷದಿ
ಮುಸುಕು ಹೊತ್ತಿನ ನಸುಕು ಬೆಳಕಳಿ
ಹೂವು ಅರಳಿತು ಚಂದದಿ.
ರಚನೆ: ವಿಘ್ನೇಶ ಭಟ್