Monday, 9 December 2013

ಓಂ ನಮೋ ಶ್ರೀ ಸಿದ್ದಿವಿನಾಯಕಯ ನಮಃ


ಗಜಮುಖನೆ ಶಿವಸುತನೆ
ಪಾರ್ವತಿಸುತ ಗಣನಾಥ
ಮೂಷಿಕ ವಾಹನ ಮೋದಕ ಹಸ್ತ
ಪಾಶಾಂಕುಶಧಾರಿ ಗಣನಾಥ.

ಹರಿಹರಸುತನೆ ಷಣ್ಮುಖ ಸೋದರ
ತ್ರಿಕಾಲಜ್ಞ್ಯಾನಿ ಗಣನಾಥ
ಸಿದ್ದಿವಿನಾಯಕ ಬುದ್ದಿಪ್ರದಾಯಕ
ಮಂಗಳ ಮೂರ್ತಿ ಗಣನಾಥ

ಲೋಕೊದ್ದಾರಕ ಅನಾಥರಕ್ಷಕ
ಪ್ರಥಮ ಪೂಜ್ಯಪ್ರಿಯ ಗಣನಾಥ
ಗಣಗಳ ಅಧಿಪತಿ ಗಣಾದ್ಯಕ್ಷ ಪ್ರಭು
ಬಾಲಚಂದ್ರನೆ ಗಣನಾಥ

ಲಂಬೋಧರನೆ ಲೋಕಪಾಲಕ
ವಿಘ್ನವಿನಾಶಕ ಗಣನಾಥ
ಸಂಕಟ ಬಂದಾಗ ಪರಿಹರಿಸೋ
ಸಂಕಷ್ಟಹರನೇ ಗಣನಾಥ

ಭಕ್ತ ವತ್ಸಲಾ ಕರುಣಾ ಸಾಗರ
ನಮೋ ನಮಃ ಶ್ರೀ ಗಣನಾಥ
ಜಯಜಯ ಮಂಗಳ ಗಣನಾಥ
ಮಂಗಳ ಮೂರ್ತಿ ಗಣನಾಥ

                                                                          ಓಂ ನಮೋ ಶ್ರೀ ಸಿದ್ದಿವಿನಾಯಕಯ ನಮಃ

                                                                          ರಚನೆ :- ವಿಘ್ನೇಶ ಭಟ್

No comments:

Post a Comment