ನವ ವಸಂತವು ಮೂಡಿ ಬರುತಿರೆ...!!!
ನವ ವಸಂತವು ಮೂಡಿ ಬರುತಿರೆ
ಗಿರಿಶಿಖರ ವನರಾಶಿ ಕಣ್ಮನ ತಣಿಸುತಿರೆ
ಸ್ವಚ್ಚಂದ ಆಕಾಶ ಮನಕೆ ಮುದ ನೀಡುತಿರೆ
ತಣ್ಣನೆಯ ಗಾಳಿಯು ತಂಪನ್ನು ಸೂಸುತಿರೆ
ಹಕ್ಕಿ ಪಕ್ಷಿಗಳೆಲ್ಲ ನಿಮ್ಮನ್ನು ಸ್ವಾಗತಿಸೆ
ನಮ್ಮ ಪ್ರಕೃತಿಯ ಸೊಬಗ ಸವಿಯೋನು ಬನ್ನಿ
ಮಲೆನಾಡ ಸಿರಿಯ ಸೂಬಗ ನೂಡೋನು ಬನ್ನಿ
-> ವಿಘ್ನೇಶ ಭಟ್
No comments:
Post a Comment