ಬೇಸರದ ಛಾಯೆಯೊಂದು
ಮೂಡಿಬರುತಲಿದೆ ಇಂದು
ನಂಬಿದಾ ಸ್ನೇಹಿತರೆ ಶತ್ರುಗಳಾದರೆ
ಯಾರ ಬಳಿ ಹೋಗಲಿ ಮಿತ್ರಾಯೆಂದು .....?
ನಂಬಿದಾ ಸ್ನೇಹಿತರೆ ಶತ್ರುಗಳಾದರೆ
ಯಾರ ಬಳಿ ಹೋಗಲಿ ಮಿತ್ರಾಯೆಂದು .....?
ಕರೆದರೂ ಕೇಳದಾಂಗೆ ವರ್ತಿಸುವ ಮನುಕುಲದನಡುವೆ
ಮೂಕ ಪ್ರೇಕ್ಷಕನಂತೆ ಹೇಗಿರಲಿ ನೀ ಹೇಳು
ಒಂದರ ಮೇಲೊಂದು ದುಃಖ ಇಮ್ಮಡಿಯಾಗುತಿರೆ
ಸೊರಗಿ ಹೋಗುತಿಹುದು ಈ ಪುಟ್ಟ ಬಾಳು
ಮೂಕ ಪ್ರೇಕ್ಷಕನಂತೆ ಹೇಗಿರಲಿ ನೀ ಹೇಳು
ಒಂದರ ಮೇಲೊಂದು ದುಃಖ ಇಮ್ಮಡಿಯಾಗುತಿರೆ
ಸೊರಗಿ ಹೋಗುತಿಹುದು ಈ ಪುಟ್ಟ ಬಾಳು
ತಣ್ಣನೆಯ ಗಾಳಿಯೂ ತಂಪನ್ನು ಮರೆಮಾಚುತಿಹುದು
ಜೀವನದ ಸುಂದರ ಕ್ಷಣಗಳು ಮರೆಯಾಗುತಿಹವು
ಸುಂದರ ಕ್ಷಣಗಳು ಕಲ್ಪನೆಯ ಗೂಡಾಗಿಹವು
ಯತ್ತ ನೋಡಿದರತ್ತ ಬದುಕು ವಾಲಾಡುತಿಹುದು
ಯತ್ತ ನೋಡಿದರತ್ತ ಬದುಕು ವಾಲಾಡುತಿಹುದು
ನಂಬಿಕೆಯೆಂಬ ಅಸ್ತ್ರವ ಹಿಡಿದು ಹೊರಟ ನನಗೆ
ಛಲವೆಂಬ ಸ್ನೇಹಿತ ಕೈ ಹಿಡಿದ,
ಸಾಧನೆಯ ಹಾದಿಯಲಿ ಹೊರಟ ನನಗೆ
ಸಾಧನೆಯ ಹಾದಿಯಲಿ ಹೊರಟ ನನಗೆ
ಜಯವೆಂಬ ಆಪ್ತಮಿತ್ರ ದೊರೆತ ....!!!
" ಸಾಧಿಸುವ ಛಲ ಇದ್ದರೆ ಸಾಧನೆಯ ಹಾದಿ ಕಷ್ಟದ ಮಾತಲ್ಲ
ಸಾಧನೆಯ ಹಾದಿಯಲ್ಲಿ ಇರುವ ವ್ಯಕ್ತಿಗೆ ಶತ್ರುಗಳು ಹೋದಲ್ಲೇಲಾ "
ರಚನೆ :- ವಿಘ್ನೇಶ ಭಟ್
No comments:
Post a Comment