ಬಿಟ್ಟೇನೆಂದರು ಬಿಡದ ಈ ಮೋಹ
ಬಿಡದೇ ಕಾಡಿಹುದ್ಯಾಕೋ ಅಣ್ಣಯ್ಯ
ಬಿಡದೇ ಕಾಡಿಹುದ್ಯಾಕೋ.....
ಬಿಡದೇ ಕಾಡಿಹುದ್ಯಾಕೋ.....
ಬಿಟ್ಟೂಬಂದಿಹೆನೆಂಬ ಈ ಮನದ ಬ್ರಾಂತಿ
ಚುಚ್ಚಿ ಕಾಡಿಹುದ್ಯಾಕೊ ಅಣ್ಣಯ್ಯ
ಬಿಡದೇ ಕಾಡಿಹುದ್ಯಾಕೋ.....
ಬಿಡದೇ ಕಾಡಿಹುದ್ಯಾಕೋ.....
ಬಿಟ್ಟೇನೆಂದರು ಬಿಡದ ಈ ಮೋಹ
ಬಿಡದೇ ಕಾಡಿಹುದ್ಯಾಕೋ.....
ಕರುಳಾಬಳ್ಳಿಯ ಮೋಹ ಬಲು ಬೇಗಾ ಹೋಗಾದು
ತೊರೆಯೇನೆಂದರು ಮನವು ತೊರೆಯಾದು
ತೊರೆದೇ ತೀರುವೆನೆಂದು ಹೋಗಾದಿರು ಅಣ್ಣಯ್ಯ
ಒಬ್ಬಂಟಿ ಬಾಳು ಬರಿಗೂಳು,ಒಬ್ಬಂಟಿ ಬಾಳು ಬರಿಗೂಳು
ಬಿಟ್ಟೇನೆಂದರು ಬಿಡದ ಈ ಮೋಹ
ಬಿಡದೇ ಕಾಡಿಹುದ್ಯಾಕೋ.....
ತೊರೆದೇ ಹೋದರೆ ನೀನು ಹ್ಯಾಂಗಾ ಬಾಳಲಿ ನಾನು
ತೊರೆದೇ ಹೋದರೆ ನೀನು ಹ್ಯಾಂಗಾ ಬಾಳಲಿ ನಾನು
ತೊರೆದೇ ಹೋದರೆ ನೀನು ಹ್ಯಾಂಗಾ ಬಾಳಲಿ ನಾನು
ಏಕಾಂಗಿ ಬಾಳು ಬರಿಗೋಳು
ಏಕಾಂಗಿ ಬಾಳು ಬರಿಗೋಳು
ಬಿಡದೇ ಕಾಡಿಹುದ್ಯಾಕೋ.....!!!
ರಚನೆ:- ವಿಘ್ನೇಶ ಭಟ್ ಏಕಾಂಗಿ ಬಾಳು ಬರಿಗೋಳು
ಬಿಟ್ಟೇನೆಂದರು ಬಿಡದ ಈ ಮೋಹ
ಬಿಡದೇ ಕಾಡಿಹುದ್ಯಾಕೋ ಅಣ್ಣಯ್ಯಬಿಡದೇ ಕಾಡಿಹುದ್ಯಾಕೋ.....!!!
No comments:
Post a Comment